Saturday 6 August 2016

ಎದುರು ಮನೆಯ 'ಅಮ್ಮನನ್ನು' ನೆನಪಿಸುವ ತಂಬಿಟ್ಟು

ಬಣ್ಣ ಬಣ್ಣದ ಉಡುಗೆ ತೊಟ್ಟು, ಕೈ ತುಂಬಾ ಬಣ್ಣದ ಬಳೆ ತೊಟ್ಟು, ಜಡೆಗೆ ಹೂ ಮುಡಿದು ತಲೆಯ ಮೇಲೆ  ತಂಬಿಟ್ಟಿನ ಆರತಿ ಹೊತ್ತ ಹೆಂಗಸರು ಹಾಗು ಹೆಣ್ಮಕ್ಕಳು ದೇವರ ಮೆರವಣಿಗೆಯ ಮುಂದೆ ನಡೆದು ಹೋಗುತ್ತಿರುವುದು ನೋಡುವುದೇ ನನಗೊಂದು ಸಂಭ್ರಮ. ಆಗಿನ್ನು ಪುಟ್ಟ ಹುಡುಗಿ ನಾನು ಪ್ರಪಂಚ ಇನ್ನೂ ವಿಸ್ಮಯವಾಗಿದ್ದ ಕಾಲ. ಪ್ರತಿ ವರ್ಷ ನಾವಿದ್ದ ಕಡೆ ಊರ ಹಬ್ಬ ನಡಿತಿತ್ತು ಆಗ ಹೊಂಬಾಳೆಯನ್ನು ಸಿಗಿಸಿ, ಮಾವಿನೆಲೆ, ಬಣ್ಣ ಬಣ್ಣದ ಹೂವಿನಿಂದ ಅಲಂಕರಿಸಿದ ತಂಬಿಟ್ಟಿನ ಆರತಿ ಹೊತ್ತವರ ಮೆರವಣಿಗೆ ಬೀದಿಗಳಲ್ಲಿ ಬಳಸಿ ದೇವಸ್ಥಾನದವರೆಗೂ ನಡೆಯುತ್ತಿತ್ತು. ಎಲ್ಲರೂ ಒಟ್ಟಿಗೆ ಸಂತೋಷದಿಂದ ನಡೆಯುವುದು ನೋಡುವುದೇ ಒಂದು ಖುಶಿ. ಪ್ರತಿ ವರ್ಷದಂತೆ ಒಂದು ಭಾನುವಾರದ ಮುಂಜಾನೆ ಆ ವರ್ಷವು ನನ್ನ ಕೆಲವು ಗೆಳತಿಯರು, ನೆರೆಯ ಹೆಂಗಸರು ತಂಬಿಟ್ಟಿನ ಆರತಿಗೆ ಅಣಿ ಮಾಡ್ಕೋತಿದ್ರು, ನಾ ಅಮ್ಮನಲ್ಲಿ ಓಡಿ ಹೋಗಿ 'ಅಮ್ಮಾ ನಾನು ಕೂಡ ಆರತಿ ಎತ್ತ್ಕೊಂಡು ಸಂಜೆ ಅವರ ಜೊತೆ ಮೆರವಣಿಗೆಯಲ್ಲಿ ಹೋಗ್ತೀನಿ' ಎಂದೆ, ಆಗ ಅಮ್ಮ 'ಸುಮ್ನೆ ಅವರು ಮೆರವಣಿಗೆ ಹೋದಾಗ ನಿತ್ಕೊಂಡು ನೋಡು ಸಾಕು' ಎಂದು ಸ್ವಲ್ಪ ಗದರುವ ದನಿಯಲ್ಲಿ ಹೇಳಿದರು. ಅಮ್ಮನಿಗೆ ಗೊತ್ತು ನಾ ಏನಾದ್ರು ಅಪರೂಪಕ್ಕೆ ಕೇಳಿದ್ರೆ ಹಠ ಮಾಡ್ತೀನಿ ಅಂತ.   ಅಮ್ಮನ ಗದರಿಕೆಗಿಂತ ಸ್ವಲ್ಪ ಜೋರಾಗಿ ನಾ ಹಠದಿಂದ  ಹೋಗಲೇಬೇಕೆಂದು ಅಳಲು ಶುರು ಮಾಡಿದೆ. ಆಗ ಅಮ್ಮ 'ನನಗೆ ತಂಬಿಟ್ಟು ಮಾಡಕ್ಕೆ ಬರಲ್ಲ' ಎಂದು ನನಗೆ ತಿಳುವಳಿಕೆಯ ಮಾತು ಹೇಳಲು ಪ್ರಯತ್ನಿಸಿದರು, ಆದರೂ ನನ್ನ ಗೋಳು ಕಡಿಮೆ ಆಗಲಿಲ್ಲ. ನಮ್ಮ ಮನೆ ಎದುರು ಒಂದು ವಠಾರವಿತ್ತು, ಅಲ್ಲಿ ಒಂದು ಮನೆಯಲ್ಲಿ ಚಿಕ್ಕಮ್ಮ ಎನ್ನುವರು ನನ್ನ ಅಳು ನೋಡಿ ಅಮ್ಮನಲ್ಲಿ ಕಾರಣ ಕೇಳಿದಾಗ ಅಮ್ಮ ನನ್ನ ಅಳುವಿನ ಹಿಂದಿನ ಕಾರಣ ಹೇಳಿದ್ರು.... ಆಗ ಆ 'ಚಿಕ್ಕಮ್ಮ'  "ಏ ಮೀನಾ ಅದಕ್ ಯಾಕ್  ಹಾಗೆ
ಅಳ್ತಿ ನಮ್ ಮನೆ ತಂಬಿಟ್ಟಿನ ಆರತಿ ನೀನೆ ತಲೆ ಮ್ಯಾಗೆ ಹೋತ್ಕೊಳುವಂತೆ ಬಿಡು" ಅಂದ್ರು, ಅಮ್ಮನ ಸಮ್ಮತಿಗೂ ಕಾಯದೆ ಮನೆಯೊಳಗೆ ಓಡಿ, ಒಂದು ಬಣ್ಣದ ಲಂಗ ತೊಟ್ಟು, ಸಿಕ್ಕ ಸಿಕ್ಕ ಬಳೆಗಳನ್ನೆಲ್ಲ ಕೈತುಂಬಾ ತೊಟ್ಟು ಹೊರಗೆ ಓಡಿ ಬಂದೆ. ಅಷ್ಟು ಹೊತ್ತಿಗೆ ಆ ವಠಾರದ ನನ್ನ ಬೇರೆ ಗೆಳತಿಯರಿಗೂ ನಾ ತಂಬಿಟ್ಟಿನ ಆರತಿ ಎತ್ತುವ ಸುದ್ದಿ ಮುಟ್ಟಿತ್ತು. ನನ್ನ ಗೆಳತಿಯ ಅಮ್ಮ 'ಬಾ ಜಡೆ ಹಾಕ್ತೀನಿ' ಎಂದು ಕರೆದು  ಒಂದು ಜಡೆ ಹಾಕಿ, ಹೂ ಮುಡಿಸಿದರು. ಮತ್ತೇನು ನನಗೆ ಹೇಳಲಾರದಷ್ಟು ಖುಶಿ. ಸಂಜೆ ನಮ್ಮ ಬೀದಿಯ ಮುಂದೆ ದೇವರ ಮೆರವಣಿಗೆ ಬರುವುದೇ ಕಾಯ್ತ ಇದ್ದೆ.... ತಲೆಯ ಮೇಲೆ ತಂಬಿಟ್ಟಿನ ಆರತಿ ಹೊತ್ತು ಆ ಗುಂಪಿನಲ್ಲಿ ನಾನೂ ಒಬ್ಬಳಾಗಿ ನಡೆಯುತ್ತಾ ಜಂಬ ಮಿಶ್ರಿತ ಸಂತೋಷದಿಂದ ಆಗಾಗ ಅಕ್ಕ ಪಕ್ಕ ನಡೆಯುತ್ತಿದ್ದ ನನ್ನ ಗೆಳತಿಯರನ್ನು ನೋಡುತ್ತಾ ನಗು ನಗುತ್ತ ದೇವಸ್ಥಾನದವರೆಗೂ ಹೋದ್ವಿ! ನನ್ನ ಪಕ್ಕ 'ಚಿಕ್ಕಮ್ಮ' ನಡೆದು ಬರ್ತಿದ್ರು, ಅವರ ಮುಖದಲ್ಲಿ ಎಂತಹುದು ಸಮಾದಾನದವಿತ್ತು, ಕಣ್ಣಲ್ಲಿ ಸಂತೋಷವಿತ್ತು. ಆ ತಾಯಿಗೆ ಮಕ್ಕಳಿರಲಿಲ್ಲ ಬಹುಶಃ ಅಂದು ನಾನು ಅವಳ ಮಗಳಾಗಿ ಕಂಡಿರಬೇಕು..... ನನ್ನ ಪುಟ್ಟ ಮನಸಿಗೆ ಅಷ್ಟು ದೊಡ್ಡ ಸಂತೋಷ ಕೊಟ್ಟ ಆ ತಾಯಿಯನ್ನು ನಾ ಆಗಾಗ ನೆನಪಿಸಿಕೊಳ್ತೀನಿ. ನನ್ನ ಹೆತ್ತ ತಾಯಿಯೊಬ್ಬಳೆ ತಾಯಿಯಲ್ಲ, "ಚಿಕ್ಕಮ್ಮ" ನಂತಹ ಎಷ್ಟೊ "ಅಮ್ಮಂದಿರು" ನನಗೆ ತಾಯಿಯಾಗಿದ್ದಾರೆ. ತಂಬಿಟ್ಟು ಎಂದಾಗ 'ಚಿಕ್ಕಮ್ಮ' ನೀ ನೆನಪಾಗುವೆ..... ನೀ ಕೊಟ್ಟ  ತಂಬಿಟ್ಟು ಹಾಗು ಸವಿ ನೆನಪು ಇಂದಿಗೂ ನನಗೆ ನೆನಪಿದೆ ಚಿಕ್ಕಮ್ಮ.... ಅಲ್ಲ ಅಮ್ಮಾ!!!!! ಕಲ್ಮಶವಿಲ್ಲದ ಬಾಲ್ಯದ ಅಮ್ಮಂದಿರು!

Tuesday 27 October 2015

I am a stranger amidst known faces

Why this feeling of stranger still exist in me?
All known faces to me, some of them I know from the time of I came to this world, some I know few years later.
I have talked with them a lot! some have talked back to me some have communicated through their silence. I can't even say there was communication gap because I was loud enough may be I was not clear enough in communicating with them. People who communicate with silence are the most unknown minds... They scare me!
I loved them, I took care of them, in return they have started clinging on me.... May be I was not clear in drawing a line between caring and caring beyond the limit. May be I need to learn the difference... Will I?

Are they strangers to me or am I stranger to myself who has neglected to know myself but busy in understanding others which was not necessary. Was it not important to give importance to myself before giving attention to others?
So many questions but yet to find the answers, will I ever seriously try to find answer... don't know!
Yet life of a confused stranger is going on amidst known faces but unknown minds and some unknown faces but known mind.
Life of a stranger in indeed strange!

Sunday 27 September 2015

ಅಣ್ಣ ಮಾಡಿಕೊಟ್ಟ ಆ ಕಾರ್ಕ್ ಬಾಲ್

ಆಗ ನಾನು ಏಳು ವರ್ಷದವಳಿರಬೇಕು, ಒಂದು ದಿನ ಗೆಳೆಯರ ಗುಂಪು ಹತ್ತಿರದ ಬ್ಯೂಗಲ್ ರಾಕ್ ಕಡೆಗೆ ಹೊರಡಲು ಪ್ಲಾನ್ ಮಾಡಿದ್ರು. ಅಣ್ಣನ ಗೆಳೆಯರದ್ದೆ ದೊಡ್ಡ ಗುಂಪಿತ್ತು ಅವರ ಜೊತೆಗೆ ನಾನು ನನ್ನ ಗೆಳತಿ ಕೂಡ ಹೊರಟೆವು. ನಾ ಯಾವಾಗ್ಲು ಅಣ್ಣನ ಬಾಲವೇ ಅವನು ಎಲ್ಲಿ ಆಡಲು ಹೋದ್ರು ಬೇತಾಳದ ತರಹ ಹಿಂಬಾಲಿಸುತ್ತಿದೆ. ಬೇಸಿಗೆಯ ದಿನಗಾಳಾಗಿದ್ರು ಸಹ ಬ್ಯೂಗಲ್ ರಾಕ್ ತುಂಬಾ ಮರಗಳಿದ್ದಿದ್ರಿಂದ ವಾತವರಣ ತಂಪಾಗಿತ್ತು, ಆದರು ಬಿಸಿಲು, ಮಳೆ, ಚಳಿ ಲೆಕ್ಕಿಸದ ವಯಸ್ಸದು. ಎಲ್ರೂ ಅಲ್ಲಿ ಕಾರ್ಕ್ ಮರಗಳಿಂದ ಬಿದ್ದಿದ್ದೆ ಕಾಯಿಗಳನ್ನು ಆರಿಸಲು ಶುರು ಮಾಡಿದರು. ನಾನು ಕೂಡ ನನ್ನ ಅಣ್ಣನಿಗೋಸ್ಕರ ದೊಡ್ಡ ಕಾಯಿಗಳನ್ನು ಬಂಡೆಯ ಮೇಲೆ ಮತ್ತು ಸುತ್ತ ಮುತ್ತ ಹುಡುಕಿ ಕೊಟ್ಟೆ, ಅವರೆಲ್ಲರು ಕಲೆಹಾಕಿದ್ದ ಕಾಯಿಗಳನ್ನು ಬಂಡೆಯ ಮೇಲೆ ಕಲ್ಲಿನಿಂದ ಕುಟ್ಟಲು ಶುರು ಮಾಡಿದರು.  ನಾ ಕುಕ್ಕರಗಾಲಿನಲ್ಲಿ ಕೂತು ಅದನ್ನೆ ಆಶ್ಚರ್ಯವಾಗಿ ನೋಡ್ತಿದ್ದೆ. ಅಣ್ಣನನ್ನು ಮದ್ಯೆ ಮದ್ಯೆ ಇದು ಯಾಕೆ ಹೀಗೆ ಕುಟ್ಟೋದು, ಆಮೇಲೆ ಏನ್ಮಾಡ್ತೀರ ಅಂತ ಪ್ರಶ್ನೆಗಳನ್ನು ಕೇಳ್ತಾನೆ ಇದ್ದೆ. ಅವನು ಒಮ್ಮೆಯು ಬೇಜಾರು ಮಾಡ್ಕೊಳ್ದೆ ನನಗೆ ಉತ್ತರಿಸುತ್ತಾ ಅವನ ಗೆಳೆಯರ ಜೊತೆ ಹರಟುತ್ತ ಕಾಯಿಗಳನ್ನು ಕುಟ್ಟಿ ಉಂಡೆ ಮಾಡಿ ಒಂದು ಬಾಲನ್ನು ತಯಾರಿಸಿಯೇ ಬಿಟ್ಟ. ನನಗೆ ಆಶ್ಚರ್ಯ ಹಾಗು ಖುಷಿ, ಅವನು ಎಷ್ಟು ಜಾಣನಿದ್ದಾನೆ ಎಂಬ ಸಂತೋಷ ಒಂದು ಕಡೆ.  ಇದರ ಜೊತೆಗೆ ಒಂದು ಸಣ್ಣ ಆಸೆಯು ಚಿಗುರಿತು,  ನಾನು ಆ ತರ ಬಾಲ್ ಮಾಡಬೇಕೆಂದು ಆದರೆ ನನ್ನ ಕೈಯಲ್ಲಿ ಆಗತ್ತ ಗೊತ್ತಿರಲಿಲ್ಲ, ಹಿಂಜರಿಯುತ್ತಲೆ ಅಣ್ಣನನ್ನು ಕೇಳಿದೆ ಅವನು ಸ್ವಲ್ಪ ಕಾಯಿಗಳನ್ನು ನನಗೆ ಕೊಟ್ಟು ಕುಟ್ಟುವಂತೆ ಹೇಳಿದ. ನಾನು ಉತ್ಸಾಹದಿಂದ ಅಲ್ಲಿಯ ನನ್ನ ಪುಟ್ಟ ಕೈಗಳಿಗೆ ಸರಿ ಹೊಂದುವಂತ ಒಂದು ಕಲ್ಲನ್ನು ಹುಡುಕಿ ಕುಟ್ಟಲು ಶುರು ಮಾಡಿದೆ. ಆದರೆ ಅಣ್ಣಾ ಕುಟ್ಟಿದ ರೀತಿಯಲ್ಲಿ ಅದು ಅಷ್ಟು ಸುಲಭವಾಗಿ ಕುಟ್ಟಲು ಆಗ್ಲಿಲ್ಲ, ಕಾಯಿಗಳು ಆ ಕಡೆ ಈ ಕಡೆ ಹೋಗ್ತಿದ್ವು.  ನಾನು ಇನ್ನೂ ಉತ್ಸಾಹದಿಂದಲೆ ಮುಂದುವರೆಸಿ ಅಂತೂ ಇಂತೂ ಸ್ವಲ್ಪ ಪುಡಿಮಾಡಿದೆ. ಆದರು ಸ್ವಲ್ಪ ಕಾಯಿಗಳು ಇನ್ನೋ ಪುಡಿಯಾಗದೆ ಉಳಿದಿತ್ತು. ತನ್ನ ಗೆಳೆಯರ ಜೊತೆ ಮಾತಿನಲ್ಲಿ ಮಗ್ನನಾಗಿದ್ದ ಅಣ್ಣ ಬಂದು ನನ್ನ ಕೈಯಿಂದ ಕುಟ್ಟುವ ಕಲ್ಲನ್ನು ತೆಗೆದುಕೊಂಡು ಕಾಯಿಗಳನ್ನು ಚೆನ್ನಾಗಿ ಕುಟ್ಟಿ, ಪುಡಿಗಳನ್ನು ಗುಂಡಗೆ ಮಾಡಿ ಒಂದು ಚಿಕ್ಕ ಬಾಲ್ ತಯಾರಿಸಿ ನನ್ನ ಕೈಗೆ ಕೊಟ್ಟು ಇದನ್ನು ಒಂದು ದಿನ ಒಣಗಲು ಇಡಲು ಹೇಳಿದ. ನನಗೋ ಸಂತೋಷವೊ ಸಂತೋಷ, ಏನೋ ಒಂದು ಸಾಧನೆ ಮಾಡಿಬಿಟ್ಟೆ ಅನ್ನೊ ಖುಶಿ, ಅಣ್ಣನಿಗೆ ಎಷ್ಟೆಲ್ಲಾ ವಿಷ್ಯ ತಿಳಿದಿದೆ ಎಂದು ಆಶ್ಚರ್ಯ ಹಾಗು ನನಗೆ ಅಂತ ಅಣ್ಣನಿದ್ದಾನೆ ಎಂಬ ಜಂಬ. ಅಂದು ತಯಾರಿಸಿದ ಕಾರ್ಕ್ ಬಾಲಿನಲ್ಲಿ ಅಣ್ಣ ಗೆಳೆಯರ ಜೊತೆ ಆಟವಾಡ್ತಿದ್ದ. ನಾನು ಮಾತ್ರ ಅದು ಅಪರೂಪದ ವಸ್ತು ಎಂದು ಜೋಪಾನ ಮಾಡಿಟ್ಟೆ.
ಈಗಲೂ ಬ್ಯೂಗಲ್ ರಾಕ್ ಮುಂದೆ ಹೋದಾಗ ಆ ಬಂಡೆಗಳನ್ನು ನೋಡಿದಾಗ ಆ ಬಾಲ್ಯದ ದಿನಗಳು ನೆನಪಾಗ್ತದೆ.... ಅಣ್ಣ ಮಾಡಿ ಕೊಟ್ಟ ಆ ಬಾಲು ಇಲ್ಲ... ಅಣ್ಣನೂ ಇಲ್ಲ... ಅವನು ಬಿಟ್ಟು ಹೋದ ನೆನಪುಗಳು ಮಾತ್ರ ಇದೆ.... 

Thursday 6 August 2015

Why man naturally gets his first sight on woman's bulging natural beauty

Inspired by my inspiration @doctoratlarge's blog How to Marry The Woman of Your Dreams: a Scientific Treatise I started to think the other way round, like he has written reasons behind woman getting attracted to man which I don't agree with those reasons though.

Do men anytime think why they are attracted to beautiful woman at the very first sight? I am talking about those bulging natural beauty in woman. As I always say even humans are animals with their natural inbuilt instincts, when a man see a woman, his first sight would be on her breasts, is it wrong? Not really because as a man his natural instinct would be searching for partner who will carry his offspring in her womb, give birth to baby, feed their baby with breastfeeding. Every man would love his offspring to be strong so naturally he searches for strong partner. A woman with fairly good size breasts is a natural attraction for man. Now coming to another major attraction is buttocks, a good size buttocks is sign of strength of a woman who can carry the child in womb. So there is a rule in nature which is inbuilt both in man and woman in choosing their partners. Woman search for a strong man who can be a protector and provider for the family. In nature female's work is to reproduce by carrying, giving birth and taking care of the kids. So she for sure want a stronger male if she has to do her work in peace.
It is irony that perception of strength has changed its meaning. We are busy in calling people of other gender as selfish. We are forgetting the very role which nature has given to us.
I respect myself for being a woman and respect man for his contribution in celebrating my womanhood. Man and woman are beautiful creation of nature.. Let us respect each other to respect mother nature.
Dear feminists or misogynists you can always ignore my view :)

Thursday 16 July 2015

Baahubali...

As I don't like movies with fighting scenes or never watched a big budget movie for the sake of watching, I was not interested to watch Baahubali for the same reasons. Friends dragged me into theatre with little choice left I followed them.
Movie started with high voltage acting scene of Ramya Krishna, it was interesting to watch her in historical attire. To be frank first half was literally boring with that fairy tale type of story which was reminding me of some animated cartoon fairy tale. I was teasing my friends for taking me to such regular love story and disturbing my friends by asking questions about actors and actresses in the movie this continued till almost interval.
Now after the entry of Devasena and Kattappa movie took a different turn.  It got more interesting when Kattappa shares 50 years back story of Amarendra Baahubali and Bhalla. WOW what an turn, from there the real acting of Prabhas, Ramya Krishna, Dugga Batti and the Satyaraj have been explored.
The most amazing part of the movie begins when plot for war against Kalakeya is declared by Mahismati till the end of the war..... What an amazing picturization. It was like something watching live in front of the eyes. There was equal participation by Bahubali, Bhalla and Kattappa.
One of the interesting character in the movie is Kalakeya who speaks a language which no one can understand, it's hilarious particularly after every dialogue when he makes that sound 'ppttchaa'.
Character of Kattappa makes the most important in the movie awesomely played by Satyaraj. The one character which makes us to wait for the sequel of Baahubali.
Ramya Krishna has done justice to her strong character who is mother of Bhalla and aunt for Baahubali.
As mother of Shivam Anushka Shetti still remains mystery.
It was worth watching movie.
Jai Maahishmati :)
Thanks to my friends for dragging me to theatre